ಭಾವಗಳು ಕಾಡುತ್ತವೆ..
ಕನಸುತ್ತೇನೆ..ಊಹಿಸುತ್ತೇನೆ
ಅನಿಸಿದನ್ನ ಅಕ್ಷರ ರೂಪಕ್ಕಿಳಿಸುತ್ತೇನೆ
ಭಾವದ ಹಕ್ಕಿಗೆ ರೆಕ್ಕೆ ಪುಕ್ಕ ಕಟ್ಟಿ ಹಾರಿಬಿಡುತ್ತೇನೆ
ತಕ್ಷಣ ಪ್ರಶ್ನೆಗಳು ಎದುರಾಗುತ್ತವೆ
ಯಾರು ಆ-ಪ್ರೇಮಿ...?
ಹೌದು..! ಪ್ರೀತಿಸಿಯೇ -
ಪ್ರೇಮ ಕಾವ್ಯ ಹೊಸೆಯಬೇಕಾ..??
ಕಲ್ಪನೆಯ ಭಾವಕ್ಕೆ ರೂಪ ಕೊಟ್ಟರೆ
ಕಾವ್ಯವಾಗದಾ...???
ತೋಚಿದನ್ನು ಗೀಚಿದರೂ
ಸಕಾರಣ ಕೇಳುವವರಿಗೆ ಒಂದು ಮಗುಳ್ನಗು ಸಾಕಾ?
ಸೋಮವಾರ, ಆಗಸ್ಟ್ 27, 2012
ಮುನಿಸು
ನನ್ನದೇ ಕೊಠಡಿಯಲ್ಲಿ ನಾ ಏಕಾಂಗಿ
ಸಾಥ್ ನೀಡುವುದು ಗಣಕಯಂತ್ರ
ಆದರು ಮತ್ತೇನನ್ನೋ ಬಯಸುತ್ತಿದೆ ಮನಸು
ಸ್ನೇಹಿತರಿಲ್ಲದ ಜೀವನವಲ್ಲ
ಎಲ್ಲ ಸ್ನೇಹಿತರು ಒಂದೇ ಬಾರಿ ನನ್ನ ಮೇಲೆ ಮುನಿಸಿಕೊಂಡ ಹಾಗಿದೆ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ