ಭಾವಗಳು ಕಾಡುತ್ತವೆ..
ಕನಸುತ್ತೇನೆ..ಊಹಿಸುತ್ತೇನೆ
ಅನಿಸಿದನ್ನ ಅಕ್ಷರ ರೂಪಕ್ಕಿಳಿಸುತ್ತೇನೆ
ಭಾವದ ಹಕ್ಕಿಗೆ ರೆಕ್ಕೆ ಪುಕ್ಕ ಕಟ್ಟಿ ಹಾರಿಬಿಡುತ್ತೇನೆ
ತಕ್ಷಣ ಪ್ರಶ್ನೆಗಳು ಎದುರಾಗುತ್ತವೆ
ಯಾರು ಆ-ಪ್ರೇಮಿ...?
ಹೌದು..! ಪ್ರೀತಿಸಿಯೇ -
ಪ್ರೇಮ ಕಾವ್ಯ ಹೊಸೆಯಬೇಕಾ..??
ಕಲ್ಪನೆಯ ಭಾವಕ್ಕೆ ರೂಪ ಕೊಟ್ಟರೆ
ಕಾವ್ಯವಾಗದಾ...???
ತೋಚಿದನ್ನು ಗೀಚಿದರೂ
ಸಕಾರಣ ಕೇಳುವವರಿಗೆ ಒಂದು ಮಗುಳ್ನಗು ಸಾಕಾ?
ನಿನಗನ್ನಿಸಬಹುದು ನೀ ನನಗೆ ಕೇವಲ ಸ್ನೇಹಿತನೆಂದು ಅದು ನಿನ್ನ ಮನಸಿನ ಭಾವನೆ ನೀ ಆ ಸ್ನೇಹಿತನಿಗಿಂತ ಹೆಚ್ಚೆಂದು ನಾ ಹೇಗೆ ಹೇಳಲಿ ನನಗೆ ತಿಳಿದಿಲ್ಲ ನಿನ್ನನ್ನು ಮನಸಿನಲ್ಲಿಟ್ಟಿದ್ದೆ ಕೇವಲ ಸ್ನೇಹಿತನಾಗಲ್ಲ ಪ್ರಾಣ ಸ್ನೇಹಿತನಾಗಿ ಇದಕ್ಕೂ ಮಿಗಿಲಾಗಿ ಹೇಳಲು ನನ್ನಲ್ಲಿ ಪದಗಳು ಇಲ್ಲ ................