ಭಾವಗಳು ಕಾಡುತ್ತವೆ.. ಕನಸುತ್ತೇನೆ..ಊಹಿಸುತ್ತೇನೆ ಅನಿಸಿದನ್ನ ಅಕ್ಷರ ರೂಪಕ್ಕಿಳಿಸುತ್ತೇನೆ ಭಾವದ ಹಕ್ಕಿಗೆ ರೆಕ್ಕೆ ಪುಕ್ಕ ಕಟ್ಟಿ ಹಾರಿಬಿಡುತ್ತೇನೆ ತಕ್ಷಣ ಪ್ರಶ್ನೆಗಳು ಎದುರಾಗುತ್ತವೆ ಯಾರು ಆ-ಪ್ರೇಮಿ...? ಹೌದು..! ಪ್ರೀತಿಸಿಯೇ - ಪ್ರೇಮ ಕಾವ್ಯ ಹೊಸೆಯಬೇಕಾ..?? ಕಲ್ಪನೆಯ ಭಾವಕ್ಕೆ ರೂಪ ಕೊಟ್ಟರೆ ಕಾವ್ಯವಾಗದಾ...??? ತೋಚಿದನ್ನು ಗೀಚಿದರೂ ಸಕಾರಣ ಕೇಳುವವರಿಗೆ ಒಂದು ಮಗುಳ್ನಗು ಸಾಕಾ?
ಶನಿವಾರ, ಸೆಪ್ಟೆಂಬರ್ 29, 2012
ಮಂಗಳವಾರ, ಸೆಪ್ಟೆಂಬರ್ 25, 2012
ಶನಿವಾರ, ಸೆಪ್ಟೆಂಬರ್ 22, 2012
ಸ್ವರ್ಗ
ಪ್ರೀತಿಗೆ ಸ್ಥಳವಿಲ್ಲದ ನನ್ನಲಿ
ನೀ ಪ್ರೀತಿಸುವ ಹಾಗೆ ಮಾಡಿದೆ
ನಿನ್ನ ಪ್ರೀತಿ ಮೊದಲನೆಯದ್ದು
ಏನೋ ಒಂದು ಪುಳಕ ನನ್ನಲ್ಲಿ
ನೀ ಹಾಗೆ ಇದ್ದು ಬಿಡು ನನ್ನೊಡನೆ
ನೀ ನನ್ನ ಜೊತೆ ಇರುವೆ..ನಂಬಿದ್ದೇನೆ
ಕಣ್ಣಿನ ರೆಪ್ಪೆ ಹಾಗೆ ಕಾಪಾಡುತ್ತದೆಯೋ
ನಿನ್ನನು ನನ್ನ ಎದೆಯ ಗೂಡಲ್ಲಿಟ್ಟು ಬಚ್ಚಿಕೊಳ್ಳುತ್ತೇನೆ
ಸದಾ ನಿನ್ನ ಪ್ರೀತಿ ನನ್ನೋಡನಿದ್ದರೆ ...
ಅದೇ ನನಗೆ ಸ್ವರ್ಗ ಕಣೋ ..... !!!
ಗುರುವಾರ, ಸೆಪ್ಟೆಂಬರ್ 13, 2012
ಮಂಗಳವಾರ, ಸೆಪ್ಟೆಂಬರ್ 11, 2012
ಭಾನುವಾರ, ಸೆಪ್ಟೆಂಬರ್ 9, 2012
ಮೊದಲ ಪ್ರೇಮ
ಮೊದಲ ಪ್ರೇಮ
ನಿಷ್ಕಲ್ಮಶವಾಗಿ ಪ್ರೀತಿಸಿದೆ
ಆದರೆ-ನಿನ್ನೀ ಪ್ರೀತಿಯಲಿ ಮೋಸವಿತ್ತು
ನೀ ಪ್ರೀತಿಸುತ್ತಿರುವೆ ಎನ್ನುವುದೇ ಸುಳ್ಳಾಗಿತ್ತು
ತಡೆಯಲಾಗದಷ್ಟು ನೋವು ಕೊಟ್ಟೆ
ಎಣಿಸಲಾಗಲಿಲ್ಲ ಆ ನೋವ ಪರಿಣಾಮವ
ಕಣ್ಣಾಲೆಗಳು ತನಗರಿಯದ ನೆಲ ತಾಕುತ್ತಿವೆ
ಯಾವುದನ್ನು ತಡೆಯಲು ನನಿಂದ ಸಾದ್ಯವಿಲ್ಲ
ಸಾಕಾಗಿದೆ ಕಣೋ ಪ್ರೀತಿಯ ನಾಟಕದ
ಬಲೆಯಲ್ಲಿ ಬಿದ್ದು ಒದ್ದಾಡಿದ್ದು-
ಯಾವ ತರಹದ ನೋವ ಸಹಿಸಲಾರೆ
ಮೌನಕ್ಕೆ ಶರಣಾಗಿ ಪ್ರೀತಿ ಮರೆಯಲೆತ್ನಿಸುತ್ತೇನೆ..!!
-ಶೈಲೂ
ಶುಕ್ರವಾರ, ಸೆಪ್ಟೆಂಬರ್ 7, 2012
ಗುರುವಾರ, ಸೆಪ್ಟೆಂಬರ್ 6, 2012
ಮನದ ಕೀಲಿ ಕೈ
ಆತನ ಮನದ ಕೀಲಿ ಕೈ ನಾನೆಂದೂ ತಿಳಿದಿದ್ದೆ
ಭ್ರಮೆ ಇದೆಂದೂ ಅರಿತಾಗ ಕೀಲಿ ಎಲ್ಲಿ ಕಳೆದೆನೊ ತಿಳಿಯೆ.
ಆದರೂ ಆತನ ಮನದ ಬಾಗಿಲ ತೆರೆಯುವ ಕೀಲಿ
ನಾನಾಗುವೆನೆಂಬ ಆಸೆ.....
ಅದಕ್ಕಾಗೆ ಈ ಮನಸು ನನ್ನಾತನಿಗಾಗಿ ಹಾತೊರೆದಿದೆ
ಬರಮಾಡಿಕೊಳ್ಳುವ ಅವನ ಮನದಂಗಳಕ್ಕೆಂಬ
ಹುಸಿ ಕನಸು ಸಿರೀಕ್ಷೆಯಲ್ಲಿ.
ನಿರೀಕ್ಷೆಯೂ ಜೀವಂತಿಕೆಯ ತುಂಬಿದೆ
ನನ್ನ ಮನದ ತುಂಬಾ ಅವನ ಸಹಿ ನೆನಪಿನೊಂದಿಗೆ.
- ಶೈಲೂ
ಮಂಗಳವಾರ, ಸೆಪ್ಟೆಂಬರ್ 4, 2012
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)